30.12.09

ಪ್ರಾಣ ಪಕ್ಷಿ

ಕಣ್ಣಾ ಮುಚ್ಚೆ
ಕಾಡೇ ಗೂಡೆ
ಉದ್ದಿನ ಮೂಟೆ
ಉರುಳೆ ಹೋಯ್ತು
ನಮ್ಮಯ ಹಕ್ಕಿ
ನಿಮ್ಮಯ ಹಕ್ಕಿ
ಬಿಟ್ಟೆನೋ.. ಬಿಟ್ಟೆನೋ.. ಬಿಟ್ಟೆನೋ...

28.12.09

ಕವಿ ನಮನ - ಪಿ.ಸುಮರಾಣಿ

ಹೊಕ್ಕುಳಿನ ಹೂವೊಂದು
ದಾರಿ ಕಾಣದೆ ನಿಂದು
ಕೂಗುತಿದೆ ಕೊರಗುತಿದೆ
ಅಮ್ಮಾ ನಿಲ್ಲು ನಿಲ್ಲೆಂದು
ನಾನು ನಿನ್ನಯ ಚಿಗುರು
ಹಿಸುಕದಿರು ಕೊಲ್ಲದಿರು
ಬೆಳಕ ನೋಡುವ ಆಸೆ
ಅಮ್ಮ ಕಣ್ತೆರೆಯಿಸು

ಬಂಧು ಬಾಂಧವರೆಲ್ಲ
ಬಂದು ನಿನ್ನೊಡಗೂಡಿ
'ಕಂದಾ' ಎನುವ ಮಾತು
ಅಮ್ಮ ನಾ ಕೇಳುವೆನು
ಆಗಸದಿ ಚಂದ್ರಮನ
ಜತೆಗೂಡಿ ಆಡುವ
ತಾರೆಗಳ ಮಡಿಲಲ್ಲಿ
ಅಮ್ಮಾ ನಾ ನಲಿಯುವೆನು

ನಿನ್ನ ಜೀವ ಬೀಜವು ನಾ
ನಿನ್ನ ಪ್ರತಿಬಿಂಬ ನಾ
ಕಾಣದಿಹ ಕತ್ತಲೆಗೆ
ತಳ್ಳದಿರು ಅಮ್ಮ ಎನ್ನ
ಭಯವೆನಗೆ ಅಮ್ಮಾ
ಎನಗೆ ಭಯವಮ್ಮ
ಅಮ್ಮಾ ...... ಅಮ್ಮಾ....
ಅಮ್ಮಾ........

3.12.09

ಕವಿ ನಮನ - ಕುವೆಂಪು

ಜನನೀ......
ಗುರಿ ಯಾವುದೆಂದೆಲ್ಲ ಕೇಳುವರು ಎನ್ನ
ಅರಿಯರೆ ಗುರಿಯು ಸರ್ವಕೆ ನೀನೆ ಎಂದು

ಗುರಿಯು ನೀನೆಂದೆನಲು ನಾಚುವೆನು ಜನನಿ
ಗುರಿಯು ನೀನೆನಲೆನ್ನ ಮರುಳ ಎಂಬುವರು
ತಿರೆಯ ಸಿರಿ ಸುತರೆದುರು ತಲೆ ಬಾಗಿ ನಿಂತು
ಮನದಿ ನಿನ್ನನು ನೆನೆವೆ ನಮ್ರ ಭಾವದೊಳು

ವಾದಿಸುವರೆನ್ನೊಡನೆ ಜೀವನವ ನಡಸೆ
ಮೇಧಿನಿಯ ಸಿರಿಯೊಲ್ಮೆ ಇರಲೇ ಬೇಕೆಂದು
ವಾದಗಳನಾಲಿಸುವೆ ನಸು ನಗೆಯ ತಡೆದು
ಹೇ ದೇವಿ ನಿನ್ನ ಕೃಪೆ ಇಹುದೆಂದು ತಿಳಿದು

.....life is....

ನರನರೀ ಚಿತ್ರಗಳು ನಾಟಕದ ಪಾತ್ರಗಳು
ಪರಿಪರಿಯ ವೇಷಗಳು ವಿವಿಧ ಭಾಷೆಗಳು
ಬರುತಿಹವು ಬೆರಗೆನಿಸೆ ತೆರಳುವವು ಮರಳುವವು
ಮೆರವಣಿಗೆಯೋ ಲೋಕ ಮಂಕುತಿಮ್ಮ

The day i started blogging :)

Yup...
to blog.. i was inspired by one of my friend who is a thinker, a dreamer, a dramatist, a writer and a wonder ful person... :)
here it starts...