15.4.10

ಕವಿ ನಮನ - ವಸಂತ್ ಕುಮಾರ್ ಪೆರ್ಲ

ಹೂತು ಬಿಡು ಗೆಳೆಯ ಹಳೆಯ ಮೌನಗಳನ್ನು
ಕೋದು ತೆಗೆ ಹೊಸ ಮಾತ ಚಿನ್ನದದಿರುಗಳನ್ನು
ಮಾತು ಕೊಡು ಮನಕೆ ಹುರುಪಿನಲೆ ಅಲೆ ಇಂದ
ಉಕ್ಕಂದದಲಿ ಭಾರತ ನಲವೇರುವಂದ

ವರುಷ ವರುಷಗಳಿಂದ ರಾಶಿಯಾಗಿದೆ ಮೌನ
ಕೋಟೆ ಕೊತ್ತಲ ತಲದಿ ಕೊಪ್ಪರಿಗೆ ಚಿನ್ನ
ಅಲ್ಲೊಂದು ಮರಿ ಹಾವು ಹೂವರಳಿ ತನಿವಣ್ಣ
ಮಿಣಿ ಮಿಣಿಸಿ ಮೈ ಮಣಿಸಿ ತೆರೆ ತೆರೆದು ಬಣ್ಣ


ನೋಡ ನೋಡುತ ಹಾವು ಏಳು ಹೊಡೆ ಹೆಡೆ ಬಿಡಿಸಿ
ಹೊಡೆದು ಹೂಡಿದ ಹದಕೆ ಜಗವೆಲ್ಲ ಹಸಿರು
ಹಸಿರು ಉದ್ಯಾನದಲಿ ಹೂತು ಹೋಯಿತು ಕೊಡವು
ಮರೆವೆ ಸಾಮ್ರಾಜ್ಯದಲಿ ಮೌನ ದೊರೆಯು

No comments:

Post a Comment