ತಾಯಿ ಭೂಮಿ ತಾಯಿ
ಸದಯಿ ಅಭಯದಾಯಿ
ಮತ್ತೆ ನಿನ್ನ ಸ್ಪರ್ಶದಿಂದ
ಅಮಿತ ಹರ್ಷ ಮನಸಿಗೆ
ಬೆಂದವರಿಗೆ ಕಂಬನಿ
ನೊಂದವರಿಗೆ ತಂಬನಿ
ನಂಬಿ ಬಂದ ಭಾಗ್ಯ ಹೀನ
ಜನರ ಊರುಗೋಳ ನೀ
ಬಾಳಿನಲ್ಲಿ ತುಯ್ಯುವ
ಗೋಳಿನಲ್ಲಿ ಸುಯ್ಯುವ
ಹಗಲು ಇರುಳು ದುಡಿಯುವ
ಹಳ್ಳಿ ಜನರ ಶಾಂತಿ ನೀ
ಪ್ರಗತಿ ಗೀತ ಗಾಯಕಿ
ಚಿರಾನಂದದಾಯಕಿ
ಭಾಗ್ಯ ಮಾರ್ಗದಲ್ಲಿ ನಡೆವ
ಭಾರತಕ್ಕೆ ನಾಯಕಿ
No comments:
Post a Comment