ಹೊಕ್ಕುಳಿನ ಹೂವೊಂದು
ದಾರಿ ಕಾಣದೆ ನಿಂದು
ಕೂಗುತಿದೆ ಕೊರಗುತಿದೆ
ಅಮ್ಮಾ ನಿಲ್ಲು ನಿಲ್ಲೆಂದು
ನಾನು ನಿನ್ನಯ ಚಿಗುರು
ಹಿಸುಕದಿರು ಕೊಲ್ಲದಿರು
ಬೆಳಕ ನೋಡುವ ಆಸೆ
ಅಮ್ಮ ಕಣ್ತೆರೆಯಿಸು
ಬಂಧು ಬಾಂಧವರೆಲ್ಲ
ಬಂದು ನಿನ್ನೊಡಗೂಡಿ
'ಕಂದಾ' ಎನುವ ಮಾತು
ಅಮ್ಮ ನಾ ಕೇಳುವೆನು
ಆಗಸದಿ ಚಂದ್ರಮನ
ಜತೆಗೂಡಿ ಆಡುವ
ತಾರೆಗಳ ಮಡಿಲಲ್ಲಿ
ಅಮ್ಮಾ ನಾ ನಲಿಯುವೆನು
ನಿನ್ನ ಜೀವ ಬೀಜವು ನಾ
ನಿನ್ನ ಪ್ರತಿಬಿಂಬ ನಾ
ಕಾಣದಿಹ ಕತ್ತಲೆಗೆ
ತಳ್ಳದಿರು ಅಮ್ಮ ಎನ್ನ
ಭಯವೆನಗೆ ಅಮ್ಮಾ
ಎನಗೆ ಭಯವಮ್ಮ
ಅಮ್ಮಾ ...... ಅಮ್ಮಾ....
ಅಮ್ಮಾ........
ದೇಶ, ಭಾಷೆ, ಪ್ರೀತಿ, ಒಲವು, ಬದುಕು, ಪ್ರಕೃತಿ ಅದು.... ಇದು... ಏನೆಲ್ಲಾ ಓದಿದ್ದೇವೆ
ReplyDeleteನಮ್ಮಲ್ಲೇ ಇರೋ ಎಷ್ಟೋ social problems ಬಗ್ಗೆ ಯೋಚನೆ ಮಾಡೇ ಇರೋಲ್ಲ
ನನ್ನ ಗುರುಗಳಾದ ಶ್ರೀಮತಿ ಸುನೀತ ಚಂದ್ರಕುಮಾರ್ ಅವರ ಶಿಷ್ಯೆ ಪಿ.ಸುಮರಾಣಿ ಅಂತ ಹೇಳೋಕ್ಕೆ i'm proud :)
subject/theme "ಭ್ರೂಣ ಹತ್ಯೆ "
ಹುಟ್ಟೋಕೆ ಮುಂಚೆನೇ ಒಂದು ಜೀವ ತೆಗಿಯೋ ಅಧಿಕಾರ ನಮಗಿಲ್ಲ, ಕಾನೂನಿನ ಪ್ರಕಾರ ಅಪರಾಧ, ನಮ್ಮ ಸಮಾಜದ ರೀತಿ-ನೀತಿಗಳಿಗೆ ಹೊಂದೋಲ್ಲ - ನಮಗೆಲ್ಲ ಗೊತ್ತು
ಆದ್ರು???
a very good poem really made me to think anything which provokes thought will definitely makes changes in society give my regards to the poet she is excellent :-)
ReplyDelete